Home

                           ಏಪ್ರಿಲ್ 2 ರಿಂದ ರಾಜ್ಯಾಂದ್ಯಂತ ಕರ್ನಾಟಕ ನಾಗರೀಕರಿಗೆ ಸೇವೆಗಳ ಖಾತರಿ ಕಾಯ್ದೆ-2011 ಜಾರಿಗೆ ಬಂದಿದೆ. ದಿನಾಂಕ 02/04/2012 ರಂದು ಮಾನ್ಯ ಅಧ್ಯಕ್ಷರು ಮತ್ತು ಮುಖ್ಯಾಧಿಕಾರಿಗಳು ಶ್ರೀನಿವಾಸಪುರ ಪುರಸಭಾ ಕಾರ್ಯಾಲಯದಲ್ಲಿ ಚಾಲನೆ ನೀಡಿದರು

  ಹೆಚ್ಚಿನ ಮಾಹಿತಿಗೆ  ಇಲ್ೞ್ಲಿ ಕ್ಲಿಕ್ ಮಾಡಿ

 

ಶ್ರೀನಿವಾಸಪುರ ತಾಲ್ಲೂಕು ಕೋಲಾರ ಜಿಲ್ಲೆಯಲ್ಲಿದೆ. ಶ್ರೀನಿವಾಸಪುರ ಬೆಂಗಳೂರಿನಿಂದ ಹೊಸಕೋಟೆ-ಕೋಲಾರ ಮಾರ್ಗವಾಗಿ ಸುಮಾರು 90 ಕಿ.ಮೀ ದೂರದಲ್ಲಿದೆ. ಶ್ರೀನಿವಾಸಪುರ 1919 ರಲ್ಲಿ ಸ್ಥಾಪನೆಯಾಗಿ 01.08.1996 ರಲ್ಲಿ ಪಟ್ಟಣ ಪಂಚಾಯ್ತಿಯಾಗಿ ನಂತರ 30.12.2006 ರಲ್ಲಿ ಪುರಸಭೆಯಾಗಿ ಪರಿವರ್ತನೆಯಾಯಿತು. ಇದು  ದ್ವೈ ಭಾಷಿಕ( ಕನ್ನಡ ಮತ್ತು ತೆಲುಗು) ಪ್ರದೇಶ.

ಶ್ರೀನಿವಾಸಪುರದ ಹಿಂದಿನ ಹೆಸರು ಪಾಪನಪಲ್ಲಿ. ನಂತರ ಶ್ರೀನಿವಾಸಪುರವೆಂದು ಕರೆಯಲ್ಪಟ್ಟಿತು. ಶ್ರೀನಿವಾಸಪುರ ಎಂದರೆ "ಶ್ರೀ" ವಾಸವಾಗಿರುವ ಸ್ಥಳ ಎಂದರ್ಥ.

ಶ್ರೀನಿವಾಸಪುರವೆಂದರೆ ಮಾವು ನೆನಪಿಗೆ ಬರುತ್ತದೆ. ಇಲ್ಲಿಯ ಮಾವು ಅತ್ಯಂತ ರುಚಿ. ಇದಕ್ಕೆ ಅಂತರಾಜ್ಯ ಮಾರುಕಟ್ಟೆ ಇದೆ. ಮೇ ತಿಂಗಳಿನಲ್ಲಿ ಆರಂಭವಾಗಿ ಜುಲೈನಲ್ಲಿ ಅಂತ್ಯವಾಗುತ್ತದೆ. ಇದು "ಮಾವಿನ ಮಡಿಲು" ಎಂಬ ಖ್ಯಾತಿಗಳಿಸಿದೆ.

ನಮ್ಮ ಶ್ರೀನಿವಾಸಪುರ ಪ್ಲಾಸ್ಟಿಕ್ ಮುಕ್ತ ಸುಂದರ ಸ್ವಚ್ಚ ನಗರ

ಸಾರ್ವಜನಿಕ ತಿಳುವಳಿಕೆ ಪ್ರಕಟನೆ

ಗಣಕೀಕರಣ ಯೋಜನೆಗಳು :   

Srinivasapura TMC goes to online under Karnataka Municipal Reforms Project. Mainly Birth & Death, Helpline(PGR), Website, Finance(FBAAS).

ಜನನ-ಮರಣ ಗಣಕೀಕರಣ : ಜನನ-ಮರಣ ಧಾಖಲೆಗಳು ದಿನಾಂಕ : 23-05-2010 ರಂದು ಆನ್ ಲೈನ್ ಗೊಂಡಿದ್ದುಪುರಸಭೆಯಲ್ಲಿ ಲಭ್ಯವಿರುವ  ದಾಖಲೆಗಳಿಂದ ಪ್ರಸಕ್ತ ಸಾಲಿನವರೆಗಿನ ಎಲ್ಲಾ ದಾಖಲೆಗಳನ್ನು ಗಣಕೀಕರಣಗೊಳಿಸಲಾಗಿದೆ. ಸಾರ್ವಜನಿಕರು ಪುರಸಭೆಯ ವೆಬ್ ಸೈಟ್ ನ  ಮೂಲಕ ದಾಖಲಾತಿಗಳನ್ನು ಪರಿಶೀಲಿಸಬಹುದು. ಅಧಿಕೃತ ಅಂತರ್ಜಾಲ : www.srinivasapuratown.gov.in. 

ಸಾರ್ವಜನಿಕ ದೂರು ನಿವಾರಣಾ ಕೇಂದ್ರ : ಸಾರ್ವಜನಿಕ ದೂರು ನಿವಾರಣಾ ಕೇಂದ್ರವು ದಿನಾಂಕ : 21-01-2009 ರಂದು ಆನ್ ಲೈನ್ ಗೊಂಡಿದ್ದು, ವಾರದ 7 ದಿನಗಳು ಬೆಳಿಗ್ಗೆ ಗಂ. 8-00 ರಿಂದ ರಾತ್ರಿ ಗಂ. 8-00 ರ ತನಕ ಕಾರ್ಯನಿರ್ವಹಿಸುತ್ತದೆ. ಸಾರ್ವಜನಿಕರು ಪತ್ರ, ದೂರವಾಣಿ, ಆನ್ಲೈನ್ ಮೂಲಕ ದೂರುಗಳನ್ನು ಸಲ್ಲಿಸಬಹುದು. ದೂರವಾಣಿ : 08157-245002, ಅಧಿಕೃತ ಅಂತರ್ಜಾಲ : www.srinivasapuratown.gov.in.

ಆಸ್ತಿ ತೆರಿಗೆ ಯೋಜನೆ :  ಯೋಜನೆಯು ಪ್ರಗತಿಯಲ್ಲಿದ್ದು, ಈಗಾಗಲೇ 23 ವಾರ್ಡ್‌ ( 36 ಬ್ಲಾಕ್‌ ) ಗಳ  ಎಲ್ಲಾ ಆಸ್ತಿಗಳ ಎಲ್ಲಾ ಆಸ್ತಿಗಳ ಮಾಹಿತಿಯನ್ನು ದಿನಾಂಕ : 18-03-2013 ರಂದು ಗಣಕೀರಕಣಗೊಂಡಿವೆ.  ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬಹುದು.ಹಾಗೂ ಆಸ್ತಿ ತೆರಿಗೆ ಎಸ್.ಎ.ಎಸ್ ಕ್ಯಾಲ್ಕುಲೇಟರ್ ನ್ನು ಉಪಯೋಗಿಸಬಹುದಾಗಿದೆ.

ಸ್ಥಳೀಯ ಸಂಸ್ಥೆ ವೆಬ್ಸೈಟ್ : ಶ್ರೀನಿವಾಸಪುರ ಪುರಸಭೆ ಅಧಿಕೃತ ಅಂತರ್ಜಾಲ : www.srinivasapuratown.gov.in  ಕೆ.ಎಂ.ಆರ್.ಪಿ. ಯೋಜನೆಯಡಿ  ಸ್ಥಾಪಿತಗೊಂಡಿದ್ದು, ಸಾರ್ವಜನಿಕರಿಗೆ ಬೇಕಾದ ಕಚೇರಿ ಸಂಬಂಧಿಸಿದ ಹೆಚ್ಚಿನ ಎಲ್ಲಾ ಮಾಹಿತಿಗಳನ್ನು ಅಂತರ್ಜಾಲದ ಮೂಲಕ ಪಡೆದುಕೊಳ್ಳಬಹುದು.

This page maintained by - Junior programmar

 

No. Of Visitors :
Last Updated   : 20/08/2015  Release History
Release 2.0.0, Powered By Karnataka Municipal Data Society & maintained by Srinivasapura TMC
This website can best viewed with the resolution 1024 * 768 using Internet Explorer 7.0 or above.
Valid CSS!