Home

                           ಏಪ್ರಿಲ್ 2 ರಿಂದ ರಾಜ್ಯಾದ್ಯಂತ ಕರ್ನಾಟಕ ನಾಗರೀಕರಿಗೆ ಸೇವೆಗಳ ಖಾತರಿ ಕಾಯಿದೆ - 2011 ಜಾರಿಗೆ ಬಂದಿದೆ.    ದಿನಾಂಕ 02/04/2012 ರಂದು ಮಾನ್ಯ ಅಧ್ಯಕ್ಷರು , ಮುಖ್ಯಾಧಿಕಾರಿಗಳು ಶ್ರೀನಿವಾಸಪುರ  ಪುರಸಭಾ ಕಛೇರಿಯಲ್ಲಿ ಚಾಲನೆ ನೀಡಿದರು.

 ಹೆಚ್ಚಿನ ಮಾಹಿತಿಗೆ ಸಕಾಲ - ಕರ್ನಾಟಕ ನಾಗರೀಕರಿಗೆ ಸೇವೆಗಳ ಖಾತರಿ ಕಾಯಿದೆ - 2011 

 

ಶ್ರೀನಿವಾಸಪುರ ತಾಲ್ಲೂಕು ಕೋಲಾರ ಜಿಲ್ಲೆಯಲ್ಲಿದೆ. ಶ್ರೀನಿವಾಸಪುರ ಬೆಂಗಳೂರಿನಿಂದ ಹೊಸಕೋಟೆ-ಕೋಲಾರ ಮಾರ್ಗವಾಗಿ ಸುಮಾರು 90 ಕಿ.ಮೀ ದೂರದಲ್ಲಿದೆ. ಶ್ರೀನಿವಾಸಪುರ 1919 ರಲ್ಲಿ ಸ್ಥಾಪನೆಯಾಗಿ 01.08.1996 ರಲ್ಲಿ ಪಟ್ಟಣ ಪಂಚಾಯ್ತಿಯಾಗಿ ನಂತರ 30.12.2006 ರಲ್ಲಿ ಪುರಸಭೆಯಾಗಿ ಪರಿವರ್ತನೆಯಾಯಿತು. ಇದು  ದ್ವೈ ಭಾಷಿಕ( ಕನ್ನಡ ಮತ್ತು ತೆಲುಗು) ಪ್ರದೇಶ.

ಶ್ರೀನಿವಾಸಪುರದ ಹಿಂದಿನ ಹೆಸರು ಪಾಪನಪಲ್ಲಿ. ನಂತರ ಶ್ರೀನಿವಾಸಪುರವೆಂದು ಕರೆಯಲ್ಪಟ್ಟಿತು. ಶ್ರೀನಿವಾಸಪುರ ಎಂದರೆ "ಶ್ರೀ" ವಾಸವಾಗಿರುವ ಸ್ಥಳ ಎಂದರ್ಥ.

ಶ್ರೀನಿವಾಸಪುರವೆಂದರೆ ಮಾವು ನೆನಪಿಗೆ ಬರುತ್ತದೆ. ಇಲ್ಲಿಯ ಮಾವು ಅತ್ಯಂತ ರುಚಿ. ಇದಕ್ಕೆ ಅಂತರಾಜ್ಯ ಮಾರುಕಟ್ಟೆ ಇದೆ. ಮೇ ತಿಂಗಳಿನಲ್ಲಿ ಆರಂಭವಾಗಿ ಜುಲೈನಲ್ಲಿ ಅಂತ್ಯವಾಗುತ್ತದೆ. ಇದು "ಮಾವಿನ ಮಡಿಲು" ಎಂಬ ಖ್ಯಾತಿಗಳಿಸಿದೆ.

ನಮ್ಮ ಶ್ರೀನಿವಾಸಪುರ ಪ್ಲಾಸ್ಟಿಕ್ ಮುಕ್ತ ಸುಂದರ ಸ್ವಚ್ಚ ನಗರ

ಸಾರ್ವಜನಿಕ ತಿಳುವಳಿಕೆ ಪ್ರಕಟನೆ

The name Srinivasapura is coined out of the Lord Sri, the Vishnu... There is a belief that this town was once crossed by Lord Sri, he stayed here for some time so the name srinivasapur meaning the place 'Sri' lived. the basic name for this town was papanapalli, a small village. the remnant village culture of the papanapalli can be seen in the pathapeta, an area to the south of the town.

Educational institutions

  • Govt PU College for Boys(most famous in the dist), Srinivasapuar.
  • Govt PU College for Girls, Srinivasapura.
  • Sri Byraveshwara Vidya Nikethana(School for social service),Byrapalli, Srinivasapura.
  • Shailendra Vidya Mandira(oldest private school), srinivasapura.
  • Sri Venu Vidya Samasthe Srinivasapura
  • Sri Byraveswara College of Management Studies. Byrapalli, Srinivasapura
  • National High School (Rural educational hope)Yeldur
  • Gangothri PU College,Srinivaspur

ಗಣಕೀಕರಣ ಯೋಜನೆಗಳು :   

Srinivasapura TMC goes to online under Karnataka Municipal Reforms Project. Mainly Birth & Death, Helpline(PGR), Website, Finance(FBAAS).

ಜನನ-ಮರಣ ಗಣಕೀಕರಣ : ಜನನ-ಮರಣ ಧಾಖಲೆಗಳು ದಿನಾಂಕ : 23-05-2010 ರಂದು ಆನ್ ಲೈನ್ ಗೊಂಡಿದ್ದುಪುರಸಭೆಯಲ್ಲಿ ಲಭ್ಯವಿರುವ 1991 ರಿಂದ ಪ್ರಸಕ್ತ ಸಾಲಿನವರೆಗಿನ ಎಲ್ಲಾ ದಾಖಲೆಗಳನ್ನು ಗಣಕೀಕರಣಗೊಳಿಸಲಾಗಿದೆ. ಸಾರ್ವಜನಿಕರು ಪುರಸಭೆಯ ವೆಬ್ ಸೈಟ್ ನ  ಮೂಲಕ ದಾಖಲಾತಿಗಳನ್ನು ಪರಿಶೀಲಿಸಬಹುದು. ಅಧಿಕೃತ ಅಂತರ್ಜಾಲ : www.srinivasapuratown.gov.in.

ಸಾರ್ವಜನಿಕ ದೂರು ನಿವಾರಣಾ ಕೇಂದ್ರ : ಸಾರ್ವಜನಿಕ ದೂರು ನಿವಾರಣಾ ಕೇಂದ್ರವು ದಿನಾಂಕ : 21-01-2009 ರಂದು ಆನ್ ಲೈನ್ ಗೊಂಡಿದ್ದು, ವಾರದ 7 ದಿನಗಳು ಬೆಳಿಗ್ಗೆ ಗಂ. 8-00 ರಿಂದ ರಾತ್ರಿ ಗಂ. 8-00 ರ ತನಕ ಕಾರ್ಯನಿರ್ವಹಿಸುತ್ತದೆ. ಸಾರ್ವಜನಿಕರು ಪತ್ರ, ದೂರವಾಣಿ, ಆನ್ಲೈನ್ ಮೂಲಕ ದೂರುಗಳನ್ನು ಸಲ್ಲಿಸಬಹುದು. ದೂರವಾಣಿ : 08157-245002, ಅಧಿಕೃತ ಅಂತರ್ಜಾಲ : www.srinivasapuratown.gov.in.

ಆಸ್ತಿ ತೆರಿಗೆ ಯೋಜನೆ :  ಯೋಜನೆಯು ಪ್ರಗತಿಯಲ್ಲಿದ್ದು, ಈಗಾಗಲೇ 23 ವಾರ್ಡ್‌ ( 36 ಬ್ಲಾಕ್‌ ) ಗಳ  ಎಲ್ಲಾ ಆಸ್ತಿಗಳ ಎಲ್ಲಾ ಆಸ್ತಿಗಳ ಮಾಹಿತಿಯನ್ನು ದಿನಾಂಕ : 18-03-2013 ರಂದು ಗಣಕೀರಕಣಗೊಂಡಿವೆ.  ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆಯಬಹುದು. www.srinivasapuratown.gov.in.

ಸ್ಥಳೀಯ ಸಂಸ್ಥೆ ವೆಬ್ಸೈಟ್ : ಶ್ರೀನಿವಾಸಪುರ ಪುರಸಭೆ ಅಧಿಕೃತ ಅಂತರ್ಜಾಲ : www.srinivasapuratown.gov.in  ಕೆ.ಎಂ.ಆರ್.ಪಿ. ಯೋಜನೆಯಡಿ  ಸ್ಥಾಪಿತಗೊಂಡಿದ್ದು, ಸಾರ್ವಜನಿಕರಿಗೆ ಬೇಕಾದ ಕಚೇರಿ ಸಂಬಂಧಿಸಿದ ಹೆಚ್ಚಿನ ಎಲ್ಲಾ ಮಾಹಿತಿಗಳನ್ನು ಅಂತರ್ಜಾಲದ ಮೂಲಕ ಪಡೆದುಕೊಳ್ಳಬಹುದು.

This page maintained by -Chief officer

 

No. Of Visitors :
Last Updated   : 17/05/2013  Release History
Release 2.0.0, Powered By Karnataka Municipal Data Society & maintained by Srinivasapura TMC
This website can best viewed with the resolution 1024 * 768 using Internet Explorer 7.0 or above.
Valid CSS!